ನೀ ಕಂಡ ಕ್ಷಣದಿಂದ

ನಿನ್ನ ಕಂಡಾಗಿನಿಂದ
ಮನಸು ಮಂಕಾಗಿ ಹೋಗಿಹುದು
ಸುಂಕ ಕೊಡಲೊಲ್ಲದು ಕನಸುಗಳಿಗೆ
ಕಣ್ಣಂಚಿನ ಮುನಿಸುಗಳಿಗೆ
ನಾನು ಮಾತ್ರವಲ್ಲ
ನನ್ನ ನೆರಳೂ ನಿನ್ನನೇ ಬೇಡುತಿಹುದು
ಅದಕಾಗಿ ಕಪ್ಪಗಿದ್ದ ನನ್ನ ನೆರಳು
ಬಣ್ಣ ಪಡೆದುಕೊಂಡಿಹುದು
ನಾ ಬರೆಯುತಿಹ ಕವನಗಳು
ನನ್ನ ಮಾತೇ ಕೇಳದಂತಾಗಿವೆ
ಎಲ್ಲವೂ ನಿನ್ನ ನೆನಪಲ್ಲೇ
ಕಾಲ ಕಳೆಯುವಂತಾಗಿವೆ
Comments
Post a Comment
ಅನ್ಸಿದ್ ಬರೀರಿ