ಸ್ನೇಹದ ನೆನಪುಗಳು



ಕಟ್ಟ ಕಡೆಯ ಕನಸಿನಲ್ಲಿ
ಕಾಡಿದಿರಿ ನನ್ನನೇ
ಪ್ರೀತಿ-ಸ್ನೇಹವೆಂದು
ಕಲುಕಿದಿರಿ ಮನಸನೇ
ವರುಷಗಳು ಕಳೆದು ಕಳೆದು
ಮರಳಿ ಮತ್ತೆ ಮತ್ತೆ ಬರುತಿವೆ
ನಾನು ದೂರ ಹೋಗಿ ನಿಂತರೂನು
ಬಳಿಗೆ ನನ್ನ ಕರೆದಿವೆ
ನಿಮ್ಮ ನೆನಪು ಹಸಿರು
ನನ್ನ ಮನದ ಮರದಲಿ
ನಿಮ್ಮ ಮುಖದ ಚಿತ್ರಗಳೇ
ನನ್ನ ಕಣ್ಣ ಪಟದಲೇ
ಅಳುವ ಆಸೆ, ನಿಮ್ಮ ಸ್ನೇಹ
ನೆನೆದುಕೊಂಡು ಮನದಲಿ
ತೊಳೆದುಕೊಳ್ಳಲಾರೆ ನೆನಪುಗಳ
ಅತ್ತು ಈ ಕಣ್ಣಲಿ
ನಿಮ್ಮ ಕೈಯ ಬರಹಗಳ
ಬರೆದುಬಿಡಿ ಹೃದಯದಿ
ಓದಿಕೊಂಡು ಹರುಷ ಪಡುವೆ
ಖಾಲಿ ಪುಟದ ಮಧ್ಯದಿ
very touchable words....
ReplyDeletethank u....
nice photos ra....
ReplyDeleteEven if i don understand kannada.... this blog is awesome..!!! :)
ReplyDelete