ಘೋರಿ ಕಟ್ಟುವ ಬನ್ನಿ

ಘೋರಿ ಕಟ್ಟುವ ಬನ್ನಿ
ನಾ ಮೇಲು ತಾ ಮೇಲೆಂದು
ಹೊಡೆದಾಡಿ ಸಾಯುತಿಹ
ಧರ್ಮಗಳಿಗೆ
ಘೋರಿ ಕಟ್ಟುವ ಬನ್ನಿ........
ತಿನ್ನಲನ್ನವಿಲ್ಲ
ಇರಲು ಮನೆಯಿಲ್ಲ
ಮೈ ಮುಚ್ಚಲು
ಬಟ್ಟೆಯಿಲ್ಲದಿದ್ದರೂ
ದೇವರ ಗುಡಿಗಳಿಗೇನು
ಬರವಿಲ್ಲ
ಪ್ರೀತಿ-ಸ್ನೇಹಗಳಿಲ್ಲ
ಭಾಂದವ್ಯವಿಲ್ಲ
ಆದರೆ ಹೊಡೆದಾಡಿ
ಸಾಯುವ ಜನರಿಗೇನು
ಕಮ್ಮಿಯಿಲ್ಲ
ಯಾರಿಗೆ ಬೇಕಾಗಿದೆ
ಅಂಧಕಾರದ ಧರ್ಮ
ಇದು ಮನುಕುಲದ
ನಡುವೆ ವಿಷ ಬೀಜ
ಬಿತ್ತುವ ಮರ್ಮ....
ನಾ ಹಿಂದುವಲ್ಲ
ನಾ ಮುಸಲ್ಮಾನನಲ್ಲ
ನಾ ಕ್ರೈಸ್ತನೂ ಅಲ್ಲ
ನಾ ಜೈನನೂ ಅಲ್ಲ
ನಾ ಭಾರತೀಯ
ಧರ್ಮ ಗೋಡೆಯ ಕುಟ್ಟಿ
ಕೆಡವುವ ನಿಜ ಭಾರತೀಯ
its too nice. i like ur play with words.
ReplyDelete