ಮುಂಬೈ ಧಾಳಿಯ ನೆನಪು

ಸಂಜೆ ಕವಿದಿತ್ತು ಸುತ್ತಲೂ
ರವಿಯು ತನ್ನ ಕೆಲಸ ಮುಗಿಸಿ
ಇನ್ನೇನು ಹೊರದುತಲಿದ್ದ
ಅಲ್ಲಲ್ಲಿ ತಾರೆಗಳಾಗಲೇ
ಇಣುಕುತ್ತಿದ್ದವು
ದುಡಿದು ದಣಿದ ಜನಗಳಿಗೆ
ಸುಮ್ಮನೆ ಮನೆಯ ಸೇರುವ ತವಕ
ಹೆಂಡತಿ ಮಕ್ಕಳ ನೋಡುವ ತನಕ
ಪಟಾಕಿ ಸದ್ದಿನಂತೆ ಕೇಳಿತ್ತು ಸಣ್ಣಗೆ
ಬರುಬರುತ್ತಾ ಜೋರಾದ
ಸದ್ದು ಭಯವಿತ್ತಿತು ಜನಗಳಿಗೆ
ಎಲ್ಲಿಂದಲೂ ಬಂದ ಗುಂಡುಗಳು
ಹೊಕ್ಕವು ಸಿಕ್ಕಸಿಕ್ಕವರ ಎದೆಗಳ
ಅದೇ ನೆಂದು ನೋಡುವ ಹೊತ್ತಿಗೆ
ಹಾರಿದವು ಪ್ರಾಣ ಪಕ್ಷಿ ಗಳು
ಚೀರಿದವು ಕೂಗಡಿದವು
ಏನೂ ಕೇಳಲಿಲ್ಲ ಗುಂಡಿನ ಸದ್ದಿನ
ಬಾಂಬಿನ ಸದ್ದಿನ ಹೊರತು
ಹೊಕ್ಕಿದರು ಸಿಕ್ಕ ಕಟ್ಟಡಗಳ
ಕಂಡಕಂಡವರ ಹೆದರಿಸಿದರು
ಮೂದಲಿಸಿದರು , ಹೊಡೆದರು
ಸಾಕಾಗಲಿಲ್ಲವೆಂದು ನರ ನಾಡಿಗಳ
ಕತ್ತರಿಸಿ ರಕುತದ ಕೊಡಿ ಹರಸಿದರು
ಖುಷಿ ಪಟ್ಟರು.
ಕೆಲವರ ಕಟ್ಟು ಕತ್ತರಿಸಿದರು
ಕೆಲವರ ಕೈ ಕಾಲುಗಳ ಕತ್ತರಿಸಿದರು
ನೋವಿಂದ ಎಷ್ಟೇ ಕೂಗಾಡಿದರು
ಕರುಣೆ ತೋರದೇ ಹೋದರು
ಭಯದ ಕಾರ್ಮೋಡವ ಬಿತ್ತಿದರು
ಆಟವೆಂಬಂತೆ ಅಲ್ಲಲ್ಲಿ ಗ್ರೆನೇಡ್ ಗಳ ಎಸೆದು
ಜೀವ ಹೋಗುವ ಆಟ ನೋಡುತ್ತಿದ್ದರು
ದುಷ್ಟತನವ ತೋರುತ್ತಿದ್ದರು
ಇವರೇನು ಮನುಷ್ಯರ ????
ಅಲ್ಲ ..... ಮನುಷ್ಯ ರೂಪದ ರಾಕ್ಷಸರು
ಧರ್ಮನ್ದತೆ ಇಂದ ಕಣ್ಣು ಕಾಣದಿಹ ಕುರುಡ ರಾಕ್ಷಸರು........
Comments
Post a Comment
ಅನ್ಸಿದ್ ಬರೀರಿ