ಪ್ರೇಮಿಯ ಶಾಯರಿಗಳು

1.ನಿನ್ನ ಜೋಡಿ ನಡೀಬೇಕು
ಅಂತ ಭಾಳ ಆಸಿ ನನಗ
ಏನ್ ಮಾಡ್ಲಿ ಜೋಡಿ ನಡಿಬೇಕಾದ್ರ
ಕರಂಟ್ ಶಾಕ್ ಹೊಡ್ದಾತಂತ
ಹೆದರ್ಕಿ ಐತಿ ಮನದಾಗ
2.ದಿನಕೊಮ್ಮೆ ಕಂಡ್ರ ಸಾಕು
ಮನಸು ಹಂಗ ಹಾರಾಡ್ ತೈತಿ
ಅಕಸ್ಮಾತ್ ನೀನ್ ನನ್ನ
ಮಾತಾಡ್ಸಿದ್ರೆ ಏನ್ ಗತಿ
ಜೀವ ಹಂಗ ಸತ್ ಹೋಗ್ತೈತಿ
3.ಕೆರಿ ದಡದಾಗ ಕುಂತು
ನಿನ ದಾರಿ ಕಾಯಕತ್ತಿದ್ದೆ
ಕೆರಿ ನೀರಾಗಿನ್ ಅಲೀಗುಳು
ಆಕಿ ಹೆಂಗೈದಳ ಅಂತ ಕೇಳಿದವು
ನಾನು ಜಾವಾಬ್ ಹೇಳಾಕತ್ತಿದ್ದೆ
4.ನಿನ್ನ ಕೆಂಪ್ ತುಟಿ ನೋಡಿದಾಗ್ಲೆಲ್ಲಾ
ಗುಲಾಬಿ ಹೂವ ನೆನಪಾಗ್ತೈತಿ
ದುಂಬಿ ಬಂದು ಅದರ್ ಮ್ಯಾಲೆ ಕುಂತಾಗ
ನಿನ್ನ ತುಟಿಗೆ ನೋವಾತೇನ ಅನಸ್ತೈತಿ
Comments
Post a Comment
ಅನ್ಸಿದ್ ಬರೀರಿ