ತಾಯಿ

ಒಡಲೊಳಗೆ ಅವಿತು
ನಾನು ಸುಮ್ಮನೆ
ಕುಳಿತುಕೊಳ್ಳುತ್ತಿರಲಿಲ್ಲ
ಕೈ ಕಾಲುಗಳಾಡಿಸಿ
ಒದ್ದಾಡುತಿದ್ದೆ
ಅಮ್ಮನಿಗೆ ನೋವ
ಕೊಡುತಿದ್ದೆ
ಆದರೂ ಅಮ್ಮ
ಬಯ್ಯುತ್ತಿರಲಿಲ್ಲ.
ಎಷ್ಟೇ ನೋವಾದರೂ
ನಗುತಿದ್ದಳು,
ಒಳಗೆ ಮೆಲ್ಲಗೆ
ಆಕಳಿಸುತಿದ್ದೆ
ಹಾಗೆ ಸಾಕಾಗಿ ಮಲಗಿಬಿಡುತಿದ್ದೆ
ಅಮ್ಮ ಜೋಗುಳ
ಹಾಡುತಿದ್ದಳು ಕಣ್ಮುಚ್ಚಿ ಹಾಗೆ.....
ಅಲ್ಲೇ ಅಳುತಿದ್ದೆ
ಅಮ್ಮ ಸಂತೈಸುತಿದ್ದಳು
ಕಥೆಯ ಹೇಳಿ....
ಯಾವ ದೇವರು ಹೇಳಿ
ಇವಳಂತೆ, ಕಷ್ಟ-ನೋವು
ಗಳೆಲ್ಲವ
ಸಹಿಸಿ ಸಲಹುವ
ದೇವರು ತಾಯಿ
good. livelyness and command on words are too nice
ReplyDelete