ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, February 24, 2010

ನಾನು ಮತ್ತು ನಲ್ಲೆಯ ನಗುವೂ


ನಿನ್ನ ನಗೆಯ ಬುಗ್ಗೆಯಲ್ಲೇ
ತೇಲಿಸುವೆ ಸುಮ್ಮನೇ
ಪ್ರೀತಿಯೆಂಬ ಘಮದಲ್ಲೇ
ಅರಳಿಸಿರುವೆ ನನ್ನನೆ

ಕೋಟಿ ಕೋಟಿ ಕನಸುಗಳ
ಕೋಟೆಯನ್ನೇ ಕಟ್ಟಿಹೆ
ನಿನ್ನ ಒಲವು ತಾನೆ ನನಗೆ
ಗಟ್ಟಿಯಾದ ಇಟ್ಟಿಗೆ

ಖುಷಿಯೆಂಬ ನೂರು ಹೂವು
ಅರಳಿರುವವು ವನದಲಿ
ನಿನ್ನ ಮೊಗದ ಚಿತ್ರವೊಂದೆ
ನನ್ನ ಈ ಮನದಲಿ

No comments:

Post a Comment

ಅನ್ಸಿದ್ ಬರೀರಿ