ಅಪ್ಪುಗೆಯ ಬಯಕೆ

ಒಮ್ಮೆ ಬಿಗಿದಪ್ಪು ಗೆಳತಿ ನನ್ನ
ಅರ್ಥೈಸಿಕೊಂಡು ಕಣ್ಣ ಕನಸುಗಳನ್ನ
ಹಗಲು-ರಾತ್ರಿಗಳೆನ್ನದೆ ನೆನೆದಿರುವೆ
ಕವನದೊನಪುಗಳಲಿ ನಿನ್ನ ಕಂಡಿರುವೆ
ಒಮ್ಮೆ ಬಿಗಿದಪ್ಪು ಗೆಳತಿ ನನ್ನ
ಅಕ್ಷರಗಳ ಬರೆಯಲು ಕುಳಿತು
ನಿನ್ನ ಚಿತ್ರ ಬಿಡಿಸಿರುವೆ ಮರೆತು
ನಗುವಿನ ಮೊಗವಷ್ಟೆ ನನಗೆ ಕಾಣುತಿದೆ
ನಗುವಿನಲರಿಗೆ ಮನಸು ಮರುಳಾಗುತಿದೆ
ಒಮ್ಮೆ ಬಿಗಿದಪ್ಪು ಗೆಳತಿ ನನ್ನ
ಕನಸುಗಳು ಬಿಡಲೊಲ್ಲವು ಹಾಗೆ
ಅಪ್ಪುಗೆಯ ನಂತರ ಹಾರುವವು ಮೆಲ್ಲಗೆ
ಮೌನಗಾಮಿಯ ಬಯಕೆ ಇದು
ಬಿಗಿದಪ್ಪಿಬಿಡು ಒಮ್ಮೆ ಜೋರಾಗಿ ಕರೆದು
Comments
Post a Comment
ಅನ್ಸಿದ್ ಬರೀರಿ