ಅಲೆಯು ಅವಳು, ತೀರ ನಾನು

ನಿನ್ನ ನಗುವ ಕಂಡ
ಮಾರನೇ ದಿನ
ಮನಸು ಹೊಚ್ಚ ಹೊಸತಂತಾಗಿದೆ
ಮುಂಗಾರಿನ ಮೊದಲ ಮಳೆಗೆ
ಘಮಗುಡುವ ಮಣ್ಣಿನಂತೆ.....
ಮಳೆಯ ಸ್ಪರ್ಷಕೆ
ಮೊಗವ ಅರಳಿಸಿ ನಗುವ
ಹಸಿರ ಚಿಗುರ ಎಲೆಯ ಮೇಲಿನ
ಹನಿಗಳಂತೆ....
ಮೊದಲ ಮಳೆಯ ಹನಿಗಳನ್ನು
ಮಿಂಚೊ ಮುತ್ತಂತಾಗಿಸಿ
ಖುಷಿ ಪಡುವ ಚಿಪ್ಪಂತಾಗಿದೆ....
ಕಡಲ ಅಲೆಯು ಬರುವ ಹೊತ್ತಲಿ
ತೀರ ಕಾದು ಕುಳಿತಿದೆ,
ಬಂದ ನಂತರ ತೀರ ಚುಂಬಿಸಿ
ನಗುತ ಕೈಗಳ ಬೀಸಿದೆ
ಅಲೆಯು ಅವಳು, ಅವಳ
ಕಾದು ಕುಳಿತ ತೀರ ನಾನು
Comments
Post a Comment
ಅನ್ಸಿದ್ ಬರೀರಿ