ಕನಸುಗಳ ಜಾತ್ರೆಯಲಿ

ಕಣ್ಮುಚ್ಚಿ ಮಲಗಿದರೆ ಸಾಕು
ನಿದ್ರಾದೇವತೆ ಕನಸುಗಳ
ಜಾತ್ರೆಗೆ ಕರೆದೊಯ್ಯುವಳು ನನ್ನ,
ಕನಸುಗಳೆಂದರೇನು
ಸುಮ್ಮನೆಯೇ????
ಕೆಲವು ರಂಗು ರಂಗುನವಾದರೆ
ಕೆಲವು ಕಪ್ಪು-ಬಿಳುಪಿನವು
ಕಣ್ಣಕವಡೆಗೆ ಮಿಟುಕುವ
ನೂರಾರು ಕನಸುಗಳು
ನನ್ನನ್ನೇ
ನೋಡುತ್ತಿದ್ದವು!!!!!
ಕೆಲವು ಪರಿಚಿತವದುವಾದರೆ
ಇನ್ನೂ ಕೆಲವು ಅಪರಿಚಿತವಾದುವು
ಸುಂದರೀ ಕನಸುಗಳು ನನ್ನನೇ
ನೋಡಿ ಕರೆಯುತ್ತಿದ್ದವು
ನಾನು ಅವರೆಡೆ ಹೋಗುವಾಗ
ದೋಪ್ಪೆಂದು ಬಿದ್ದೆ
ಮೇಲೆದ್ದು ನೋಡುದಾಗ
ಮಂಚದ ಮೇಲಿಂದ ಬಿದ್ದಿದ್ದೆ..........
Comments
Post a Comment
ಅನ್ಸಿದ್ ಬರೀರಿ