ಒಂಟಿ ಪ್ರೇಮಿಯ ಬಯಕೆ....

ನಾನೊಂದು ಹೂವಾಗುವೆ
ಏಕೆಂದರೆ ನನ್ನ ಹುಡುಗಿಗೆ
ಹೂವೆಂದರೆ ಇಷ್ಟವಂತೆ
ನಾನೊಂದು ಮುಗುಳು ನಗುವಾಗುವೆ
ಏಕೆಂದರೆ ನನ್ನ ಮನದನ್ನೆಗೆ
ನಗುವೆಂದರೆ ಇಷ್ಟವಂತೆ
ನಾನೊಂದು ಮರವಾಗುವೆ
ಏಕೆಂದರೆ ನನ್ನ ಗೆಳತಿಗೆ
ನೆರಳೆಂದರೆ ಖುಷಿಯಂತೆ
ನಾನೊಂದು ಕಾಡಿಗೆಯಾಗುವೆ
ಏಕೆಂದರೆ ನನ್ನ ಸುಂದರಿಯು
ಹುಬ್ಬ ಇನ್ನೂ ತೀಡುವಳಂತೆ
ಒಂದಿಷ್ಟು ಕವನಗಳಗುವೆ
ಏಕೆಂದರೆ ನನ್ನ ಪ್ರಿಯತಮೆಗೆ
ಕವನಗಳೆಂದರೆ ಇಷ್ಟವಂತೆ
ಅವಳ ಹೃದಯವನ್ನಲಂಕರಿಸಿದ
ಪ್ರಿಯಕರನಾಗಲಿಲ್ಲವಾದರೂ
ಅವಳ ಇಷ್ಟ-ಕಷ್ಟಗಳರಿವ
ಒಂಟಿ ಪ್ರೇಮಿಯಾಗುವೆ
Comments
Post a Comment
ಅನ್ಸಿದ್ ಬರೀರಿ