- Get link
 - X
 - Other Apps
 
ಹಸಿದ ತಕ್ಕಡಿ
    ಬಿರಿದ ಹಗಲುಗಳಲ್ಲಿ   ನಮ್ಮನ್ನೇ ಕಾಯುತಿದ್ದಾರೆ   ಖೂನಿ ಮಾಡವ ಮಂದಿ   ಅಗೋ ಫಳಗುಡುವ ಅಲಗು   ಇಗೋ ಸುಡುತಲಿದೆ ಮುಗಿಲು     ಪಕ್ಕೆಲುಬಿಗೆ ಅಂಟಿದ   ಮಾಂಸವನ್ನು ಕೊಯ್ದು   ತೂಗಿ ಮಾರುವವರಿದ್ದಾರೆ   ಪಿಂಜಾರರ ಹುಡುಗ ದೊಗಲೆ ಪ್ಯಾಂಟು   ಏರಿಸುತ್ತಾ ಓಡಿದ     ರಕುತ ಅಂಟಿದ ತಕ್ಕಡಿಗೆ   ಅದೆಷ್ಟು ಹಸಿವಿರಬಹುದು   ಅದೆಷ್ಟು ದಾಹವಿರಬಹುದು   ಒಂದು ಕಡೆ ಭಾರ   ಮತ್ತೊಂದೆಡೆ ಹಗುರ   ಚಂದಿರನ ತುಂಡರಿಸಿ ಹಾಕಿದರೂ   ತೂಕದ ಕಲ್ಲು ಮೇಲೇಳಲೆ ಇಲ್ಲ   ಸಮುದ್ರದಲೆಗಳು   ನೀಣು ಬಿಗಿದುಕೊಂಡವು   ತೋಳಗಳು   ಬಾಲ ಮುದುರಿಕೊಂಡವು     ಮೈಯತ್ ಬೀಳುತ್ತಲೇ   ಮಸಣಗಳು ತುಂಬಿ ಹೋದವೊ   ಹೂಳಲು ರೊಕ್ಕ ಕೇಳಿದರು   ಖಾಲಿ ಬಕಣಗಳ ನೋಡಿ   ಅನಾಥ ಮಾಡಿದರೊ     "ಅವ್ವಾ ತಾಯಿ   ದಫನು ಮಾಡಲು   ನಿನ್ನ ಕೆನ್ನಾಲಿಗೆಯ ಚಾಚು"   ಸಿಂಬಳ ಸೀಟುತ್ತಾ   ಅವಲತ್ತುಕೊಂಡರು     ಖೂನಿ ಮಾಡುವ ಮಂದಿ   ರಕುತ ಅಂಟಿದ ತಕ್ಕಡಿ   ಮೊಲೆ ಚೀಪುತಿದ್ದ ಕೂಸುಗಳ    ಜೊಲ್ಲು ಸುರಿಸುತ ನೋಡುತ್ತಾ ಕುಂತವು   

Comments
Post a Comment
ಅನ್ಸಿದ್ ಬರೀರಿ