ಭಘ್ನ ಪ್ರೇಮಿ

ಏಕೆ ,
ಮೊನ್ನೆ ಕೆರೆ ಏರಿಯ ಮೇಲೆ 
ಬರುವೆನೆಂದು ಏಕೆ ಬರಲಿಲ್ಲ?
ಏನಾದರು ಮನೆಯಲ್ಲಿ 
ತೊಂದರೆಯಾಯ್ತೆ?
ಅಥವಾ
ನಾನೆ ಮರೆತುಹೋದೆನೆ
ನಿನಗಾಗಿ 
ಅಮ್ಮ ಮಾಡಿದ್ದ
ಕರ್ಜಿಕಾಯಿಗಳ ತಂದಿದ್ದೆ
ಜೊತೆಗೆ 
ತಂಗಿ ಕಟ್ಟಿದ್ದ 
ಮೊಳ ಹೂವು ತಂದಿದ್ದೆ
ನಿನಗಾಗಿ
ಕಾದು ಕಾದು
ಹೂವು ಬಾಡಿ ಹೋದವು
ಇನ್ನು ಹಾಗೆ ಇವೆ 
ಕರ್ಜಿ ಕಾಯಿಗಳು.
ಬಿಸಿಲಲ್ಲಿ ನಿನಗಾಗಿ
ಕುಳಿತಿದ್ದ ನಾನು ಬೆವೆತು
ಹೋಗಿದ್ದೆ.
ಕೆರೆಯ ಅಲೆಗಳು
ಹೋಗಿ-ಬಂದು ನಿನ್ನನ್ನೇ
ಕೇಳುತ್ತಿದ್ದವು
ಆಗ ಈಗ ಎಂದು
ನಾನು ಸಮಯ 
ದೂಡಿದೆ...
ಇರಲಿ, ಬಾ ಕುಳಿತುಕೋ,
ಕೂತು ಮಾತನಾಡೋಣ...
(ಹುಡುಗಿ ಓಡುತ್ತಾ ಬಂದಿದ್ದರಿಂದ, ಏರುಸಿರು ಬಿಡುತ್ತಾ ಹೇಳಿದಳು)
ನನ್ನ ಮರೆತುಬಿಡು
ಮಾವನ ಜೊತೆಯಲ್ಲಿ
ಮದುವೆ ನಿಶ್ಚಯಿಸಿದ್ದಾರೆ.
ಈ ತಿಂಗಳ ಕೊನೆಯ ವಾರವಂತೆ....
ಇಗೊ ಲಗ್ನ ಪತ್ರಿಕೆ.
ನಾನಿನ್ನು ಬರುವೆ, ಗೆಳತಿ
ಕಾಯುತ್ತಿರುವಳು.
(ಕಾಲ್ಗೆಜ್ಜೆಯ ಸದ್ದು ಮಾಡುತ್ತಾ ಓಡಿದಳು)
ಅಳುವುದೊಂದೆ ಬಾಕಿ
ಉಳಿದಿತ್ತು
ಕೈಯಲ್ಲಿನ ಪತ್ರಿಕೆಯ ನೋಡಿ
ಹರಿದು ಹಾಕಿದ ನೋವ 
ತಡೆಯಲಾರದೆ
Comments
Post a Comment
ಅನ್ಸಿದ್ ಬರೀರಿ