ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, December 23, 2009

ಮುಗುಳು ನಕ್ಕವು ನೆನಪುಗಳುನಿನ್ನೆ ಮೊನ್ನೆಗಳೆಲ್ಲಾ
ಇನ್ನು ನೆನಪುಗಳಷ್ಟೆ
ಕಣ್ಣಿನೊಳಗೆ...
ಕ್ಯಾಂಟೀನಿನೊಳಗೆ
ಚಹಾದ ಜೋಡಿ ಹರಟಿದ್ದು,
ರಾತ್ರಿ ನಿದ್ದೆಯನೆಲ್ಲಾ
ಮಾಸ್ತರರ ಪಾಠದ ನಡುವೆ
ಹೊಡೆದದ್ದು,
ಮೊದಲ ಕವನವ
ಬೆಂಚ ಮೆಲ್ಗಡೆ ಬರೆದದ್ದು,
ಜಗಳವಾಡುವ ಸಲುವಾಗಿ
ಗೆಳೆಯನ ಕೆಕ್ಕರಿಸಿ
ನೊಡಿದ್ದು,
ಕ್ರಿಕೇಟಿನಲಿ ಸೋತೆವೆನ್ನುವ
ಭಯಕೆ ಮೋಸವಡಿದ್ದು,
ಪಾಠದ ನಡುವಲ್ಲಿ ಆಕಳಿಸಿದ್ದು
ಒಂದೆ ಎರಡೆ,
ಎಲ್ಲಾ ಕಣ್ಮುಂದೆ
ಬಂದು ಹೋಗುವವು
ಕಂಡು ಮುಗುಳುನಗುವವು

No comments:

Post a Comment

ಅನ್ಸಿದ್ ಬರೀರಿ