ನನ್ನ ಜನರಿವರು



ನನ್ನ ಕವಿತೆಗೆ ಎಣ್ಣೆ
ಎರೆದು ಹಣತೆ ಹಚ್ಚಿದವರು
ನನ್ನ ಜನ
ಜಾತಿ ಮತ ಕುಲವೇನೆಂದು
ತಿಳಿದಿಲ್ಲ
ತಿಳಿದಿರುವುದೊಂದೆ ಬಾಳಬೇಕೆಂಬ.........

ನೀರು ಕಾಣದೆ ಬಯಲು
ಬರಡಾಗಿರಲು ಜಾಲಿ ಗಿಡಗಳು
ಹಸಿರ ತೋರಿಸಿ ನಗುತಲಿವೆ
ಇದೆ ನಗುವ ನನ್ನ ಜನ
ನನಗೆ ಕಲಿಸಿದ್ದು.......

ಸುರಿದ ಬೆವರಿನ ನಾತ
ಆರುವ ಯಾವುದೇ ಸುಳಿವಿಲ್ಲ.
ಕಷ್ಟದಲ್ಲಿಳಿದ ಉಪ್ಪು ಬೆವರಿನಂತವರು
ನನ್ನ ಜನಗಳು ಕಪ್ಪು ಮಣ್ಣಿನಂತವರು
ಸುರಿದಷ್ಟು ತಂಪು... ಬೆಳೆದಷ್ಟು ಹರವು...

ಹಾಕಿರುವ ಕೆರಗಳು ಸವೆದು
ಸಣಕಲಾದರೂ ಬಿಡಲೊಲ್ಲದ ನನ್ನ ಜನ
ಜೀವನದ ಮೇಲಿನ ಆಸೆಯನು
ನನಗೆ ಕಲಿಸಿದ್ದು.....

ಹೊಟ್ಟೆ ತುಂಬಲಾರದ ಊಟ
ಉಂಡರೂ ಸರಿಯೇ ಪ್ರೀತಿ
ಸ್ನೇಹವ ಉಂಡು ಒಂದೊಮ್ಮೆ
ಡೇಗಿದರೆ......

ಕನಸಿಲ್ಲದ ಊರಿಗೆ ನಿದ್ರೆಯ ಪಯಣ
ಇಂಥವರು ನನ್ನ ಜನ
ಜೀವನದ ಪಾಠವ ಹೇಳಿಕೊಟ್ಟವರು.

(ದ.ರಾ.ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆಯ್ಕೆಯಾದ ಕವನ)

Comments

  1. ಮನವನು ಅನುವುಗೊಳಿಸುವ ಜೀವಂತ ಕವಿತೆ ಇದು.ಸತ್ವಶಾಲಿಯಾದ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿಯುಳ್ಳ ಜೀವಂತ ಕವಿತೆ.ಮನಸನ್ನು ಗಾಢ ಆಲೋಚನೆಗೆ ಹಚ್ಚಿ ಒಳ ಸುಳಿಯನ್ನು ಎಚ್ಚರಿಸುತ್ತಾ ಪರಿವರ್ತನೆಗೆ ಪ್ರೇರಣೆ ತುಂಬಿ ಮೂಡಿರುವ ಗಟ್ಟಿ ಕವಿತೆ ಇದು.ಇಂಥ ರಚನೆಗಳು ನೂರ್ಕಾಲ ಉಳಿಯುತ್ತವೆ.ನಮ್ಮ ಮನದ ಭಾವನೆಯ ಪ್ರತಿರೂಪ ಈ ಕವಿತೆ.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ