ಬುರ್ಖಾದೊಳಗಿನ ಹುಡುಗಿ ಹೇಳಿದ ಕಥೆ


ಕಪ್ಪು ಕೋಣೆಯ ಒಳಗೆ
ಕತ್ತಲೆಯ ಬದುಕು
ನಾನೊಂದು ಕೆಲಸಮಾಡುವ
ಬರಿದಾದ ಸರಕು
ಕಣ್ಣಕನಸುಗಳೆಲ್ಲಾ
ಹರಕು-ಮುರುಕು

ಯಾರಿಗು ಕೆಳಿಸದಂತೆ
ನಾನು ಮಾತನಾಡಬೇಕು
ಕೇಳಿಸಲೂಬಾರದಂತೆ
ನನ್ನ ಮನಕು

ಒಳಗಿರುವ ನೋವು
ಒಳಗೆ ಇರಬೇಕಂತೆ
ಹೊರಗಿದ್ದರು ಯಾರು
ಕೇಳುವರು ನನ್ನ ವ್ಯಥೆಯ-ಕಥೆ

ಮುಖವನ್ನೇ ನೋಡದವರು
ಇನ್ನೇನು ನನ್ನ ಮನವ
ನೋಡಿಯಾರು

ಧರ್ಮ ಕರ್ಮದ
ಅಡಕತ್ತರಿಗೆ ಸಿಲುಕಿರುವ
ಅಡಕೆಯಂತಾಗಿರುವೆ
ಆದರೂ ಬಾಳುವೆನು
ಹಣೆಬರಹವೆ ಇದೆಂದು

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ