ಬಯಲು ಮತ್ತು ನಾಯಿ ಎಂಬೊ ನಾಯಿ

ಎಂದೊ ನೀರು ಹರಿದಿದ್ದ
ಹಗರಿಯಲಿ,
ಮೂಸುತ್ತಾ ನಡೆದಿತ್ತು
ಎಲುಬು ತುಂಬಿದ ನಾಯಿ....
ಶಕ್ಯವಿಲ್ಲದ ತನ್ನ ಬಾಲವನು
ಮುಗುಳಿಯ ನಡುವಲ್ಲಿ
ಸಿಕ್ಕಿಸಿಕೊಂಡು.....
ಅಲ್ಲೊಂದು ಇಲ್ಲೊಂದು ಸತ್ತು
ಒಣಗಿದ ಏಡಿಗಳ ಕಡಿದು
ನಾಲಿಗೆಯ ಸವರುತಲಿತ್ತು
ಜಾಲಿ ಗಿಡಗಳು ಹತ್ತಾರನು
ಮೂಸಿ ಕಷ್ಟ-ಸುಖವನು
ವಿಚರಿಸಿಕೊಂಡು
ಕಾಲೆತ್ತಿ ನೀರ ಪೂಸುತಲಿತ್ತು
ಏನೊ ಮಹತ್ಕಾರ್ಯ
ಸಾಧಿಸಿದಂತೆ
ಓ ಎಂದು ಅರಸಿ
ಮಣ್ಣ ಹುಡಿಯಲ್ಲಿ ಉರುಳಾಡಿ....
Comments
Post a Comment
ಅನ್ಸಿದ್ ಬರೀರಿ