ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, April 14, 2013

ಯುಗಾದಿಗೊಂದು ಬೇಡಿಕೆ

ಹಸಿರುಟ್ಟ ಮಾಮರವೆ
ಹೂಬಿಟ್ಟ ಬೇವ್ ಮರವೆ
ದಾರಿಗುಂಟಲಿ ಹರವಿ
ನಿಮ್ಮ ಚೆಲುವ;||
ಮನೆಯ ಬಾಗಿಲಿಗೆ
ಬೇಕಿಲ್ಲ ತೋರಣ,
ನಿಶ್ಯಕ್ತ ಜೀವಕ್ಕೆ
ನೀಡಿ ಬಲವ||

ಬಳ್ಳಿಗಂಗಳ ನಡುವೆ
ಉಂಗುರದ ಕೈಬೆರಳು,
ಮುಳ್ಳು ಬೇಲಿಯ ಹಿಡಿದು
ಬದುಕಿದಂತೆ||
ಸುಖದ ನಾಳೆಗಳ
ಬೇಡಿಲ್ಲ ಈವರೆಗು,
ಕೊಡು ಬದುಕ ಸಿಹಿ-ಕಹಿಯ
ಕಲೆಸಿದಂತೆ||

ಅಂಡಲೆದ ಕಾಲಗಳ
ಬಾಸುಂಡೆ ಮೈಮೇಲೆ,
ಆವಿಯಾಯಿತು ನೋಡು
ರಕುತ ಬೆವರು||
ನೀನು ದೇವರಂತೆ
ಹೊಸ ವಸಂತವಂತೆ
ನೋವುಗಳ ಮೇಲೆ
ಮುಲಾಮು ಸವರು||
-ಪ್ರವರ


No comments:

Post a Comment

ಅನ್ಸಿದ್ ಬರೀರಿ