ರೆಪ್ಪೆ ಕತ್ತರಿಸಿದ ಕಣ್ಣು

ಮೌನವಾಗಿದ್ದೆ
ಹಿಡಿ ಮಾತುಗಳೂ ಜೊತೆಗಿದ್ದರೂ,
ಸಾವು ಹೆಣೆದಿದ್ದ ಬದುಕಿನಂತೆ,

ಆಕಾಶ ಎಂದೂ ಖಾಲಿಯಾಗುವುದಿಲ್ಲ
ಅದು ನಮ್ಮ ಕುರುಡಷ್ಟೆ!
ಎಲ್ಲವೂ ವಿಸ್ತಾರವಾಗಿ ಹರಡಿಕೊಂಡಿವೆ
ಅಣು ಬಾಂಬುಗಳಂತೆ
ಸಾವ ಹೆಗಲ ಮೇಲೆ ಕೂರಿಸಿಕೊಂಡಂತೆ

ಹಗಲ ಹಲಗೆಯ ಮೇಲೆ
ಹಾವುಗಳ ನರ್ತನ,
ರೆಪ್ಪೆ ಕತ್ತರಿಸಿದ ಕಣ್ಣಿನಂತೆ

ನಾಲ್ಕು ಜನಗಳ ಹೆಗಲು ಗಟ್ಟಿಗಿತ್ತು
ಮಸಣ ಮುಟ್ಟಿಸಿದರು,
ಸುಟ್ಟ ಮೇಲೆ ಗಾಳಿಯಲ್ಲಿ ಹಾರುತ್ತೇವೆ
ಬೂದಿಯಾಗಿ

ಧೂಪದ ನಡುವಿದ್ದ ದೇವರುಗಳಿಗೆಲ್ಲಾ
ಯಾವಾಗಲೋ ಮೈಲಿಗೆಯಾಗಿವೆ,
ನಾವೆಲ್ಲ ಯಾವ ಲೆಕ್ಕ?

ಇರುವಷ್ಟು ಕಾಲ ಅತ್ತು ಮುಗಿಸುವ,
ಹೂತಿಡುತ್ತಾರೆ, ಮಣ್ಣೊಳಗೆ
ನಿಶ್ಚಿಂತವಾಗಿರುವ,
ಕಣ್ಣು ಮುಚ್ಚಿ ತಣ್ಣನೆ ಬೆಳಕಂತಿದ್ದ
ಬುದ್ದನಂತೆ.....
-ಪ್ರವರ

Comments

Popular posts from this blog

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

ಸಂಜೆ ಹೊತ್ತು ನೆನಪಾದವರು:(