ಮತ್ತದೇ ಬಿಂಬ


ನಿನ್ನೆಗಳು ಹರಿದಿದ್ದವು,
ಒಂದಷ್ಟು ತೇಪೆ ಹಚ್ಚಿ
ನಗುತ್ತಾ ಬದುಕುತಿದ್ದೇವೆ,
ತೇವವಾಗಿದ್ದ ಕಣ್ಣುಗಳ
ಉಜ್ಜಿಕೊಂಡು,
ಎಲ್ಲರೂ ಹಾಗೆ ಇದ್ದಾರೆ

ಅಜ್ಜಿ ಹೊಲಿದಿಟ್ಟ ಕೌದಿಯಂತೆ
ಚೂರು ವಾಸನೆಯಿದ್ದರೂ
ನಾಳೆಗಳ ಚಳಿಯ ಬೆಚ್ಚಗಾಗಿಸಬಹುದು

ಅಲ್ಲೆಲ್ಲೋ ಕಥೆಗಳ ಹೆಣೆದಿಟ್ಟು
ಕನಸುಗಳ ಆಸೆಗೆ ಜೊಲ್ಲು ಇಳಿಸುತ್ತಾ
ಮಲಗಿದ್ದೇವೆ
ಕೋಣೆಯ ಮೂಲೆಯಲ್ಲಿ ಕಟ್ಟಿದ್ದ
ಜೇಡವನ್ನು ನೋಡುತ್ತಾ,
ಮತ್ತದೇ ಕತ್ತಲು
ಮತ್ತದೇ ರಾತ್ರಿ
ಹೊಸತಿರಬಹುದು ನಾಳೆ
ರೆಪ್ಪೆ ಮುಚ್ಚಿದಂತೆ ಎಲ್ಲವೂ
ನಿರಾಳ,

ಮತ್ತದೇ ಹಾಳು ಮುಖ
ಕನ್ನಡಿಯ ಮುಂತೆ,
ನಿದ್ದೆಗಣ್ಣಿಗೆ ಗಾಜಿನೊಳಗಿನ
ಪ್ರತಿಬಿಂಬ ಮೊಬ್ಬು ಮೊಬ್ಬು
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ