ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Tuesday, January 1, 2013

ಹೊಸತು ನಾಳೆ

ದಾಟಿಹೆವು ದೂರ
ಮನಸೆಲ್ಲ ಭಾರ
ನೆಚ್ಚಿಹೆವು ತುದಿಯ
ಬೆಳಕ,
ನಿನ್ನೆಯಂತೆಯೇ
ನಾಳೆ ಕತ್ತಲ
ಮರೆತುಬಿಡುವ
ತವಕ.

ನೀನು ನನ್ನವ
ನಾನು ನಿನ್ನವ
ಬಾಳು ಅಲೆಯ
ತೆರದಿ,
ಬಿಗಿದುಕೊಳ್ಳಲಿ
ಅಪ್ಪಿಕೊಳ್ಳಲಿ
ಸಂಬಂಧ ಖುಷಿಯ
ಪರಿಥಿ

ನೋವ ಕಹಿಯನು
ಬೆಲ್ಲದೆದೆಯಲಿ
ಹೂತು ಬಿಡುವ
ಬನ್ನಿ,
ನನ್ನೆದೆಯ ಕೊಂಚ
ನಿನ್ನೆದೆಯ ಕೊಂಚ
ಹಿಡಿ ನಗುವ ಹೊತ್ತು
ತನ್ನಿ

ಸಂಭ್ರಮದ ನಾಳೆ
ಸವಿಯೋಣು ಬಾರ
ಬೆಳಕಲ್ಲಿ ನಾವು
ಕುಣಿದು,
ಬಾನೆಲ್ಲ ರಂಗು
ಭುವಿಯೆಲ್ಲ ರಂಗು
ಕತ್ತಲೆಯ ನಿನ್ನೆ
ಕಳೆದು
-ಪ್ರವರ

No comments:

Post a Comment

ಅನ್ಸಿದ್ ಬರೀರಿ