ಅಹಂ

ರೊಟ್ಟಿ ಹೆಂಚಿನ ರೋಷವಿದ್ದ ನೆಲಕೆ ಮುಟ್ಟಿದವರನ್ನೆಲ್ಲಾ ಸುಟ್ಟುಬಿಡಬೇಕೆನ್ನೊ ಹಠ ನನ್ನ ಕವಿತೆ, ಗುಡಿಸಲೊಳಗೆ ನಿಟ್ಟುಸುರ ನಿಡುಬೆಂಕಿ, ಆಲ್ಲೆಲ್ಲೊ ಕಳಚಿದ್ದ ಕಂದನಳು ನನ್ನ ಕವಿತೆ ಅಲ್ಲೊಂದು ಮಸಣ ಗೂಬೆ ಹಸಿವಿನ ಕೂಗು, ಘೋರಿಯೊಳಗಿನ ಸತ್ತವನ ತೊಳಲಾಟ ನನ್ನ ಕವಿತೆ ಎಲುಬಿನೆದೆ ಮೇಲೆ ತೆಳ್ಳನೆಯ ತೊಗಲು, ಕಣ್ಣ ತೆರೆ ಬಿಡದಂತ ಬಿಳಿಯ ಹಗಲು ತುಂಡು ಮೂಳೆಗೆ ಜೊಲ್ಲು ಇಳಿಸುತ ನಡೆದ ನಾಯಿ ನನ್ನ ಕವಿತೆ ಹಸಿರೆಲ್ಲ ಬತ್ತಿ ಬಯಲು ಬಣಗುಡುವಾಗ ಕಂಕುಳೆತ್ತಿ ಹಸಿರ ತೋರಿ ಕಿಸುಗುಡುವ ಜಾಲಿಗಿಡ ನನ್ನ ಕವಿತೆ -ಪ್ರವರ