Posts

ಕಟುಗ ಸುಬಾನಿ

Image
ತುಕ್ಕು ಹಿಡಿದ ತಗಡಿನ ಶೆಡ್ಡು, ಪಂಚರ್ರಾಗಿ, ಕಡ್ಡಿ ಮುರಿದು ಮೂಲೆ ಸೇರಿದ್ದ ಸೈಕಲ್ಲು ಮೂಗಿನ ಸಿಂಬಳಕೆ ನುಸಿ ಮಣ್ಣಿನ ಮೊಳಕೆ ಮಟನ್ನು ಕಡಿದು ಉಳಿದ ಮೂಳೆಗಳಿವೆ ಎಸೆದಿದ್ದ ಚೂರು ಮಾಂಸದ ತುಂಡಿಗೆ ಬಾಲ ಕತ್ತರಿಸಿದ ನಾಯಿಗಳ ಕಚ್ಚಾಟ ಕಟುಗ ಸುಬಾನಿಯ ಅಂಗಿಗೆ ಮೆತ್ತಿದ್ದ ಕೆಂಪನೆಯ ರಗುತ ಬೆಳಗ್ಗಿಂದ ಮೂರು ಕುರಿಗಳ ಕಡಿದರೂ ಹೊಳಪಿದ್ದ ಕಂದಲಿ... ಎಂದೋ ಹರಿದು ಈಗ ನಿಶ್ಚಲವಾಗಿ ನಿಂತಿದ್ದ ಚರಂಡಿಯ ನೀಚು ವಾಸನೆ ಹೀಗಿದ್ದರೂ ಕಟುಗ ಸುಬಾನಿ ನಗುತ್ತಿದ್ದಾನೆ ಹವಾಯಿ ಚಪ್ಪಲಿಯಲ್ಲಿ ಹೊಕ್ಕಿದ್ದ ಜಾಲಿಮುಳ್ಳುಗಳ ತೆಗೆಯುತ್ತಿದ್ದಾನೆ.....

ಹೀಗೊಂದು ಸಾಂತ್ವಾನ

Image
ಅತ್ತೂ ಅತ್ತೂ ಕಣ್ಣೀರೆಲ್ಲಾ ಬತ್ತಿ ಮರಳುಗಾಡಾಗಿದೆ ಕಣ್ಣು ಆಕೆ ಮಾಡಿದ ಗಾಯ ಎದೆಯಲ್ಲಿ ಅಂಗೈ ಅಗಲದ ಹುಣ್ಣು ಇಷ್ಟು ದಿನ ಜೊತೆಗಿದ್ದು ಹೆಜ್ಜೆ ಮೇಲೆಜ್ಜೆಯನಿಕ್ಕಿ ಕಾಲು ಸೋಲುವವರೆಗೂ ಕೈ ಹಿಡಿದು ನಡೆದಿದ್ದಳು ಹೃದಯದೊಳಗಿನ ಪ್ರೀತಿಯ ತನುವೆಲ್ಲ ಧಾರೆಯೆರೆದು ತಾಯಂತೆ ಪೋಷಿಸಿದ್ದಳು, ನೋವು ಉಮ್ಮಳಿಸಿ ಬರುವಾಗ ನನ್ನ ಬಿಗಿದಪ್ಪಿ ಬೆಚ್ಚಗಿನ ಸಾಂತ್ವಾನ ಹೇಳುತಿದ್ದಳು ಮಳೆಯಲ್ಲಿ ಕೊಡೆ ಇಲ್ಲದೆ ನೆನೆದು ಮೈಮೇಲಿನ  ಬಟ್ಟೆ ಒದ್ದೆಯಾಗಿ  ಸಣ್ಣಗೆ ನಡುಗುವಾಗ ತುಟಿಗೆ ತುಟಿ ಒತ್ತಿ ಕಿಡಿ ಹೊತ್ತಿಸಿ ಆಕೆ ಹೋಗುವಾಗ ಹಿಂತಿರುಗಿ ಕಣ್ಣಂಚಲ್ಲೇ ಪೋಲಿ ನಗು ನಗುವಾಗ ಹಾ! ಆಕೆಗೆ ಆಕೆಯೇ ಸಾಟಿ ಈಗಾಕೆ ನನಗೆ ಜೊತೆಯಿಲ್ಲ ಜೊತೆಯಿಹ ನೆನಪುಗಳಿಗಾ ಕಸುವಿಲ್ಲ..... ಬತ್ತಿರುವ ಕಣ್ಣು, ಎದೆ ಮೇಲಿಹ ಹುಣ್ಣು ಎರಡಷ್ಟೇ..... ಇನ್ನಾರಲೂ ಮನಸಿಲ್ಲ

ಬೆಂಕಿಯಾರಿಸೊ ಪರಿ

Image
ನನ್ನೆದೆಯೊಳಗೆ ಮೆ ಲ್ಲಗೆ ಮೊಳಕೆಯೊಡೆಯುತ್ತಿದ್ದ ಪ್ರೀತಿಯ ಬೆಂಕಿ ದೇಹವನಾವರಿಸುತ್ತಿದೆಯಲ್ಲಾ !!! ಹೃದಯದ ಯಾವುದೋ ಮೂಲೆಯಲ್ಲಿ ಕಿಡಿಯಾಗಿ ಹೊಕ್ಕಿ , ರಕುತದೊಳಗೆಲ್ಲ ನುಗ್ಗಿ ಕೆಂಪುತನವನ್ನೆಲ್ಲಾ ಸರ ಸರನೇ ಮುಕ್ಕುತ್ತಿದೆಯಲ್ಲಾ !!! ಆಕೆ ಕೇಶ ಕಪ್ಪಿನ ರಾತ್ರಿಯಲಿ ಗಳಿಸಿದ್ದ ಕನಸುಗಳೆಲ್ಲಾ ಧಗ ಧಗನೆ ಉರಿದು ಚೀರಾಡುತ್ತಿವೆಯಲ್ಲಾ !!! ಆ ಬಿಸಿಯ ಬೇಗೆಗೆ ತುಟಿಗಳೊಣಗಿ ಹಪಹಪಿಸುತ್ತಿವೆಯಲ್ಲಾ !!! ಆಕೆಯ ಚೆಂಗುಲಾಬಿಯ ರಂಗ ಕದ್ದು ನಳ ನಳಿಸುತ್ತಿಹ ಅಧರಗಳ ಸ್ಪರ್ಷಿಸದ ಹೊರತು ಬೆಂಕಿಯಾರುವ ಯಾವುದೇ ಸುಳುಹಿಲ್ಲ !!!!

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

Image
( ಕಾಲೇಜು ನನ್ನ ಜೀವನದಲ್ಲಿ ಹತ್ತಾರು ಬದಲಾವಣೆಗಳನ್ನ ಹಾಗು ಹೀಗೆ ಬದುಕಬೇಕೆಂಬ , ಪ್ರೀತಿ ಎಂದರೆ ಹೀಗೆ , ಸ್ನೇಹಿತರೆಂದರೆ ಹೀಗೆಂಬ ಪಾಠಗಳ ಹೇಳಿಕೊಟ್ಟು ಗುರು , ನನ್ನ ಮನಸಲ್ಲಿ ಪ್ರೀತಿ - ಪ್ರೇಮಗಳ ಪದಗಳ ಹುಡುಕಾಟ ನಡೆಸಿದ ನೆನಪುಗಳನ್ನು ಹಾಗೂ ಆ ನೆನಪುಗಳ ಬೀಜಗಳ ಬಿತ್ತಿದವರ ಪಾತ್ರ ಎಲ್ಲವನ್ನು ನಿಮ್ಮೆದುರಿಗಿಡುವ ಕಸರತ್ತು ಅಷ್ಟೆ ಹಾಗೂ ........ ) ಸ್ಕೂಲಿನಲ್ಲಿ ಮಕ್ಕಳು ಮಕ್ಕಳೆಂದೇ ನಮಗೆ ಮಕ್ಕಳ ಪಟ್ಟ ಕಟ್ಟಿದ್ದರು , ಕಾಲೇಜಿಗೆ ಸೇರಿಕೊಂಡು ದೊಡ್ಡವರಾಗಬೇಕೆಂದು ಪ್ರತಿಘ್ನೆ ಮಾಡಿದ್ದೆವು . ಕಾಲೇಜಿಗೆ ವಿಜ್ನಾನ ವಿಷಯದಲ್ಲಿ ಪ್ರವೇಶ ಪಡೆದಾದ ಮೇಲೆ ಕ್ಲಾಸಿಗೆ ಹೋಗುವ ಅ ಸುದಿನ ಬಂದಿತ್ತು . ಅಮ್ಮ ಯುದ್ಧಕ್ಕೆ ಹೊರಟುನಿಂತ ಸೈನಿಕನಿಗೆ ಆಶಿರ್ವದಿಸುವಂತೆ ಮುಖಕ್ಕೆ ಮಂಗಳಾರತಿ ಎತ್ತಿ ಹೊಸ ಪೆನ್ನನ್ನು ಜೇಬಿನಲ್ಲಿಟ್ಟು ಹೋಗಿಬಾ ಎಂದು , ಕಾಲೇಜಿನಲ್ಲಿ ಯಾರ ಜೊತೆಗೂ ಜಗಳವಾಡಬಾರದೆಂದು ಹೇಳಿ ಗೇಟಿನವರೆಗೂ ಬಂದು ಒಮ್ಮೆ ದೃಷ್ಟಿ ತೆಗೆದು ಹಾಕಿದರು , ಅಪ್ಪ ಐವತ್ತು ರೂಪಾಯಿ ಜೇಬಿನಲ್ಲಿ ತುರುಕಿ ಚೆನ್ನಗಿ ಓದು ಎಂದು ಹೇಳಿದರಾದರೂ ನನ್ನ ಓದಿನ ಸಲುವಾಗಿ ಅವರ ಮನಸಲ್ಲಿ ಕೊಂಚ ದುಗುಡವಿತ್ತು . ನಾನು ಹೊಸಬಟ್ಟೆಗಳ ತೊಟ್ಟು ಕೊಂಚ ಖುಷಿ ಕೊಂಚ ಭಯದಿಂದ ಹೊರಟು ನಿಂತೆ . ದಾರಿಯುದ್ದಕ್ಕೂ ಏನೇನೋ ಯೋಚನೆಗಳು...

ನಾವೇಕೆ ಕಿವುಡರಾಗಿದ್ದೇವೆ!!!

Image
ಗಂಟಲು ಹರಿಯುವಂತೆ ಕೂಗಿದರೂ ಯಾರೊಬ್ಬರಿಗೂ ಕೇಳಿಸುತ್ತಿಲ್ಲ, ಮಳೆ ಸುರಿಸಲೆಂದು ಕಪ್ಪಿಟ್ಟಿದ್ದ ಮೋಡಗಳೇ ಕೂಗಿಗೆ ಓಗೊಟ್ಟಿ ಚದುರಿರುವಾಗ ನಾವೇಕೆ ಕಿವುಡರಾಗಿದ್ದೇವೆ!!! ಮಸಣದಲಿ ಘೋರಿಗಳೊಳಗೆ ಮಲಗಿದವರೆಲ್ಲಾ ಎಚ್ಚರವಾಗಿ ಎದ್ದು ಕೂತಿರುವಾಗ, ನಾವಿನ್ನು ಬದುಕಿದ್ದೇವೆ ನಾವೇಕೆ ಕಿವುಡರಾಗಿದ್ದೇವೆ!!!! ನೂರುಗಾವುದ ದೂರದ ನೀಲಿ ಸಾಗರಕೆ ಕೇಳಿಸಿದೆಯಲ್ಲ ಅದಕೆ ಕಳಿಸುತಿದೆ ಅಲೆಗಳ ಸದ್ದು ಬಂದ ದಿಕ್ಕಿನೆಡೆಗೆ, ಸದ್ದು ನಮ್ಮ ಪಕ್ಕದಿಂದಲೇ ಬಂದಿದೆ ಆದರೂ ನಾವೇಕೆ ಕಿವುಡರಾಗಿದ್ದೇವೆ!!!! ಹಸಿದವರ ಕೂಗಿದೆ,ತುಳಿತಕೆ ಸಿಕ್ಕಿ ಜಿನುಗುತಿಹ ರಕುತದ ಕೂಗಿದೆ, ಹರಿದ ಚಿಂದಿ ಬಟ್ಟೆಯ ಕೂಗಿದೆ ಆದರೂ, ನಮಗೆ ಕೇಳಿಸುತ್ತಿಲ್ಲ, ಏಕೆಂದರೆ ನಾವು ಜಾಣ ಕಿವುಡರು.....

ಕಲ್ಲುಬಂಡೆ ಮತ್ತು ನದಿ

Image
ಏಸೊಂದು ವರುಸದಿಂದ ಆಸೆಯ ಉಸುರಿಲ್ಲದೆ ಅದೇ ನದಿಯ ದಂಡೆಯ ಮೇಲೆ ನಿಂತಲ್ಲೇ ನಿಂತಿದೆ ಬರೀ ಕಲ್ಲು, ಬೃಹತ್ ಬಂಡೆಗಲ್ಲು ಉಕ್ಕಿ ಹರಿದಿದ್ದ ನದಿಯ ಪರಿವೆಯಿಲ್ಲದೇ, ಪರಿಷೆಯಿಲ್ಲದೇ ತಾನೇನಾದೇನೆಂಬ ಅಂಜಿಕೆಯೂ ಇಲ್ಲದೇ, ಭಯಾನಕ ಅಲೆಗಳಿಗೆ ಎದೆಯೊಡ್ಡಿ ನಿಂತಿತ್ತು ಹೃದಯವಿಲ್ಲದೇ. ಹಸಿರು ಪಾಚಿಯ, ಖುಷಿಯ ಕುಹಕಕೆ ಮುಖವ ಕಿವುಚದೆ ನಿಂತಿದೆ, ಅಣಬೆಯ ಅಣಕಿಗೆ ಕಿವಿಯ ನೂಕದೇ ಕಲ್ಮುಖದ ಮೇಲೆ ನಗುವ ಕುಣಿಸಿದೆ. ಬಿಸಿಲ ಬಾಧೆಗೆ ನದಿಯು ಬಾಡಿ ಹನಿ ಹನಿಯು ಬಾಗಿ ನಡೆದಿವೆ, ನಾನು ಬಾಡೆನು, ಬಿಸಿಲಲೊಣಗೆನು ನಿನ್ನ ಬಿನ್ನಹ ಕೇಳೆನು ಎಲ್ಲೆ ಇರದ ಕಲ್ಲು ನಾನು ಇಲ್ಲಿಂದ ಎಲ್ಲಿಗು ಕದಲೆನು, ನೀಲಿ ಬಾನಲಿ ಮೋಡವಿರುವವು, ಅವುಗಳ ನೆರಳು ನನ್ನೆಯ ಮೇಲಿದೆ, ಮಳೆಯ ಹನಿಗಳು ಬಂದೆ ಬರುವವು ಎಂಬ ನಂಬಿಕೆ ಕಾಲನ ಮೇಲಿದೆ, ಹೃದಯವಿಲ್ಲದ ಕಲ್ಲು ನಾನು ಹೃದಯವಂತಿಕೆ ತುಂಬಿದೆ ಹೃದವಿರುವ ಮನುಜ ನೀನು ಮನಸು ಬರಿಯ ಮುಳ್ಳಲಿ ತುಂಬಿದೆ

ಕಪ್ಪು ನೆರಳು

Image
ಉಪ್ಪು ನೀರಲ್ಲಿ ಕಪ್ಪಾಗಿ ಏನೋ ನೆರಳಿನಂತೆ ಕಾಣುತ್ತಿದೆಯಲ್ಲ, ಅದರಲೆಗಳ ಜೊತೆ ಸುಮ್ಮನೆ ಮೆಲ್ಲಗೆ ಸಾಗುತ್ತಿದೆಯಲ್ಲ ನೆರಳು ಏನನ್ನೋ ಮಾತಾಡುತ್ತಿದೆ ಅದರ ಮಾತುಗಳ ಕೇಳುವ ಕಿವಿ ನನಗಿಲ್ಲವಲ್ಲ, ಸತ್ತವರ ನೆರಳಂತಿದೆ ಅದು, ಜೀವವಿದೆ ಎನ್ನಿಸಿದರೂ ಸಹಿತ ನೆರಳಿಗೆ ಜೀವವಿದೆ ಎನ್ನುವುದು ಮೂಢತನ ತಾನೆ ಇದು ಯಾರದೂ ನೆರಳಲ್ಲ, ಕಪ್ಪು ನೆರಳು ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ, ಅದು ಇಣುಕಿದವನ ಕಪ್ಪು ಮನಸು ಮುಪ್ಪಾಗಬಹುದಾದ ವಯಸ್ಸು