Posts

ನಾವೇಕೆ ಕಿವುಡರಾಗಿದ್ದೇವೆ!!!

Image
ಗಂಟಲು ಹರಿಯುವಂತೆ ಕೂಗಿದರೂ ಯಾರೊಬ್ಬರಿಗೂ ಕೇಳಿಸುತ್ತಿಲ್ಲ, ಮಳೆ ಸುರಿಸಲೆಂದು ಕಪ್ಪಿಟ್ಟಿದ್ದ ಮೋಡಗಳೇ ಕೂಗಿಗೆ ಓಗೊಟ್ಟಿ ಚದುರಿರುವಾಗ ನಾವೇಕೆ ಕಿವುಡರಾಗಿದ್ದೇವೆ!!! ಮಸಣದಲಿ ಘೋರಿಗಳೊಳಗೆ ಮಲಗಿದವರೆಲ್ಲಾ ಎಚ್ಚರವಾಗಿ ಎದ್ದು ಕೂತಿರುವಾಗ, ನಾವಿನ್ನು ಬದುಕಿದ್ದೇವೆ ನಾವೇಕೆ ಕಿವುಡರಾಗಿದ್ದೇವೆ!!!! ನೂರುಗಾವುದ ದೂರದ ನೀಲಿ ಸಾಗರಕೆ ಕೇಳಿಸಿದೆಯಲ್ಲ ಅದಕೆ ಕಳಿಸುತಿದೆ ಅಲೆಗಳ ಸದ್ದು ಬಂದ ದಿಕ್ಕಿನೆಡೆಗೆ, ಸದ್ದು ನಮ್ಮ ಪಕ್ಕದಿಂದಲೇ ಬಂದಿದೆ ಆದರೂ ನಾವೇಕೆ ಕಿವುಡರಾಗಿದ್ದೇವೆ!!!! ಹಸಿದವರ ಕೂಗಿದೆ,ತುಳಿತಕೆ ಸಿಕ್ಕಿ ಜಿನುಗುತಿಹ ರಕುತದ ಕೂಗಿದೆ, ಹರಿದ ಚಿಂದಿ ಬಟ್ಟೆಯ ಕೂಗಿದೆ ಆದರೂ, ನಮಗೆ ಕೇಳಿಸುತ್ತಿಲ್ಲ, ಏಕೆಂದರೆ ನಾವು ಜಾಣ ಕಿವುಡರು.....

ಕಲ್ಲುಬಂಡೆ ಮತ್ತು ನದಿ

Image
ಏಸೊಂದು ವರುಸದಿಂದ ಆಸೆಯ ಉಸುರಿಲ್ಲದೆ ಅದೇ ನದಿಯ ದಂಡೆಯ ಮೇಲೆ ನಿಂತಲ್ಲೇ ನಿಂತಿದೆ ಬರೀ ಕಲ್ಲು, ಬೃಹತ್ ಬಂಡೆಗಲ್ಲು ಉಕ್ಕಿ ಹರಿದಿದ್ದ ನದಿಯ ಪರಿವೆಯಿಲ್ಲದೇ, ಪರಿಷೆಯಿಲ್ಲದೇ ತಾನೇನಾದೇನೆಂಬ ಅಂಜಿಕೆಯೂ ಇಲ್ಲದೇ, ಭಯಾನಕ ಅಲೆಗಳಿಗೆ ಎದೆಯೊಡ್ಡಿ ನಿಂತಿತ್ತು ಹೃದಯವಿಲ್ಲದೇ. ಹಸಿರು ಪಾಚಿಯ, ಖುಷಿಯ ಕುಹಕಕೆ ಮುಖವ ಕಿವುಚದೆ ನಿಂತಿದೆ, ಅಣಬೆಯ ಅಣಕಿಗೆ ಕಿವಿಯ ನೂಕದೇ ಕಲ್ಮುಖದ ಮೇಲೆ ನಗುವ ಕುಣಿಸಿದೆ. ಬಿಸಿಲ ಬಾಧೆಗೆ ನದಿಯು ಬಾಡಿ ಹನಿ ಹನಿಯು ಬಾಗಿ ನಡೆದಿವೆ, ನಾನು ಬಾಡೆನು, ಬಿಸಿಲಲೊಣಗೆನು ನಿನ್ನ ಬಿನ್ನಹ ಕೇಳೆನು ಎಲ್ಲೆ ಇರದ ಕಲ್ಲು ನಾನು ಇಲ್ಲಿಂದ ಎಲ್ಲಿಗು ಕದಲೆನು, ನೀಲಿ ಬಾನಲಿ ಮೋಡವಿರುವವು, ಅವುಗಳ ನೆರಳು ನನ್ನೆಯ ಮೇಲಿದೆ, ಮಳೆಯ ಹನಿಗಳು ಬಂದೆ ಬರುವವು ಎಂಬ ನಂಬಿಕೆ ಕಾಲನ ಮೇಲಿದೆ, ಹೃದಯವಿಲ್ಲದ ಕಲ್ಲು ನಾನು ಹೃದಯವಂತಿಕೆ ತುಂಬಿದೆ ಹೃದವಿರುವ ಮನುಜ ನೀನು ಮನಸು ಬರಿಯ ಮುಳ್ಳಲಿ ತುಂಬಿದೆ

ಕಪ್ಪು ನೆರಳು

Image
ಉಪ್ಪು ನೀರಲ್ಲಿ ಕಪ್ಪಾಗಿ ಏನೋ ನೆರಳಿನಂತೆ ಕಾಣುತ್ತಿದೆಯಲ್ಲ, ಅದರಲೆಗಳ ಜೊತೆ ಸುಮ್ಮನೆ ಮೆಲ್ಲಗೆ ಸಾಗುತ್ತಿದೆಯಲ್ಲ ನೆರಳು ಏನನ್ನೋ ಮಾತಾಡುತ್ತಿದೆ ಅದರ ಮಾತುಗಳ ಕೇಳುವ ಕಿವಿ ನನಗಿಲ್ಲವಲ್ಲ, ಸತ್ತವರ ನೆರಳಂತಿದೆ ಅದು, ಜೀವವಿದೆ ಎನ್ನಿಸಿದರೂ ಸಹಿತ ನೆರಳಿಗೆ ಜೀವವಿದೆ ಎನ್ನುವುದು ಮೂಢತನ ತಾನೆ ಇದು ಯಾರದೂ ನೆರಳಲ್ಲ, ಕಪ್ಪು ನೆರಳು ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ, ಅದು ಇಣುಕಿದವನ ಕಪ್ಪು ಮನಸು ಮುಪ್ಪಾಗಬಹುದಾದ ವಯಸ್ಸು

ರೆಕ್ಕೆ ಸುಟ್ಟ ಚಿಟ್ಟೆ

Image
ಸುಟ್ಟ ರೆಕ್ಕೆಯ ಹೊತ್ತು ಚಿಟ್ಟೆ ಅಳುತ್ತಿತ್ತು, ಹಾರಲಾರದೆ ಕನಸ ಕಟ್ಟಿಕ್ಕುತ್ತಿತ್ತು, ನೂರಾರು ಬಣ್ಣಗಳ ಹೂರಣದ ಚಹರಿಲ್ಲ, ನಾನು ಹಾರುತ್ತಿದ್ದ ಪಂತಂಗವೆಂಬ ಮೊಹರಿಲ್ಲ, ಹೂವಿಂದೂವಿಗೆ ಜಿಗಿವ ಕಸುವು ಕಳೆದಾಗಿದೆ, ಗಾಳಿಗೆ ಮೈಯೊಡ್ಡುವ ಸುಖವೂ ಬರಿದಾಗಿದೆ, ಆಗ ಯಾರ ಹಂಗಿರದೇ ಹಾರಿ ಹರಿದಾಡುತ್ತಿದ್ದ ಪತಂಗವೀಗ, ತೆವಳುತ್ತ ಸಾಗೊ ಹುಳವಾಗಿದೆ

ನಾನು ನೀವಿಲ್ಲಿದ್ದೇವೆ

ಸಂಜೆಗೆಂಪಾರಿತ್ತು, ಬಾನು ಕಪ್ಪೇರಿತ್ತು ಬಾಯಾರಿ ಭುವಿಯು ಸುಮ್ಮನೆ ಕುಳಿತಿತ್ತು ಹಸಿರೆಲೆಯ ಸದ್ದಿಲ್ಲ, ಕೋಗಿಲೆಯ ಕುಹುವಿಲ್ಲ, ಜೇನುಹುಳು ಹುಡುಕುತಿಹ ಹೂವಲ್ಲಿ ಮಕರಂದವಿಲ್ಲ ನಿಡುಸುಯ್ಯೋ ಬೆಂಕಿಯಿದೆ ಕನಸುಗಳ ಬಡಿತವಿದೆ ಮೂಡಲಾರದ ಚಿತ್ತಾರಗಳ ಓ ಎಂಬ ಕೂಗಿದೆ ಇಲ್ಲೊಂದು ಮಸಣವಿದೆ ಸತ್ತವರ ಕುರುಹಿದೆ ಮೇಲೊಂದು ಕಾಂಚಾಣ ದೊರೆಗಳ ಮಹಲಿದೆ ನಾನು ನೀವಿಲ್ಲಿದ್ದೇವೆ, ಹಗಲು ನಿದ್ರೆಯ ಹೊದ್ದೇವೆ ಇನ್ನೊಬ್ಬರ ಚಿಂತೆಯಿಲ್ಲದ ಚಿತೆಯಲ್ಲಿ ಮಲಗಿದ್ದೇವೆ

ಹುಡುಗಿ ನಗೀ

Image
ಹುಡುಗಿ ನಗೀ ಅಂದ್ರ ಬೆಂಕಿ ಕಿಡಿ ಇದ್ದಂಗ~~~ ಆಕಿ ನಗೋದ್ ನೋಡಿದ್ರ ಹುಡುಗರ್ ಎದಿ ಸುಟ್ಟಂಗ~~~ ನಾನು ಆಕಿ ಜೋಡಿ ಪ್ರೀತ್ಯಾಗ ಬಿದ್ದಾವ, ಸುಟ್ರು ಪರವಾಗಿಲ್ಲ, ಆಕಿಲ್ಲ ಅಂದ್ರ ನಾನು ಇದ್ದೂ ಸತ್ತಂಗ~~~

ಸಂಜೆ ಹೊತ್ತು ನೆನಪಾದವರು:(

Image
ಮನೇಲಿ ಕೂತು ಕೂತು ಬೇಜಾರಾಗಿ ಸಂಜೆ ಹೊತ್ತು ಜೋಳದ ಕೂಡ್ಲಿಗಿ ಟಾರು ರೋಡುನಗುಂಟ ಹೊರಟೆ. ದೂರದೂರಿಂದ ಬಂದಿದ್ದ ಮೋಡಗಳೆಲ್ಲಾ ಒಂದಕ್ಕೊಂದು ಆಲಿಂಗನ ಮಾಡಿಕೊಂಡು ಸ್ವಾಗತಿಸುತಿದ್ದವು. ಸೂರ್ಯ ಒಬ್ಬನೇ ಅಲ್ಲೆಲ್ಲೋ ಕದ್ದು ಕೂತು ಇಣುಕುತಿದ್ದ. ನಾಲ್ಕೈದು ದಿನಗಳ ಮಳೆಗೆ ನೆಲ ಮೇಲೆಲ್ಲ ಹಸಿರು ಹಾಸಿತ್ತು, ಪಳುವಕ್ಕನ ಗುಂಡಿಯಲ್ಲಿ ತುಂಬಿದ್ದ ನೀರಲ್ಲಿ ಎಮ್ಮೆಗಳು ಆರಾಮಾಗಿ ಸುಖಿಸುತ್ತಿದ್ದವು. ಈರಯ್ಯಜ್ಜ ಅಲ್ಲೇ ಮರದಡಿಯ ಕಲ್ಲಿನ ಮೇಲೆ ಅಂಡಚ್ಚಿ ಗಣೇಶ ಬೀಡಿ ಸೇದಿ ಬುಸ್ಸೆಂದು ಹೊಗೆ ಬಿಡುತ್ತಿದ್ದ ಹಾಗೆ ಚಳಿಯ ಪರಿಗೆ ಕೈ ಹಾಕಿ ದೇಹದ ಭಾಗಗಳನೆಲ್ಲಾ ತುರಿಸಿಕೊಂಡು ಹಾ ಹಾ ಹಾಅ~~~ ಎನ್ನುತ್ತಾ ಸದ್ದೊರಡಿಸುತ್ತಿದ್ದ. ಆತನೆಡೆಗೊಂದು ಲುಕ್ಕು ಕೊಟ್ಟು ಹೊರಟೆ, ಆತ ಮಾತ್ರ ಫಳ್ಳೆಂದು ಹಲ್ಲಿಲ್ಲದ ಬಾಯ ತೆಗೆದು ನಕ್ಕೇಬಿಟ್ಟ. ಮುಂದೆ ಹೋಗುತ್ತಲೇ ಸಂಕಮ್ಮಜ್ಜಿ ಕಟ್ಟಿಗೆಗಳ ಹೊರೆ ತಲೆ ಮೇಲೆ ಎತ್ತಿಟ್ಟುಕೊಳ್ಳಲು ಕಷ್ಟಪಡುತಿತ್ತು, ಸ್ವಲ್ಪ ಹೊರೆಯ ಎತ್ತಿ ತಲೆ ಮೇಲಿಟ್ಟೆ, ಕೆಳಗಿದ್ದ ಬುತ್ತಿಗಂಟನ್ನು ಕೈಯಾಗ ಕೊಡು ಅಂತು ಕೊಟ್ಟೆ, ನಸ್ಯಾಪುಡಿಗೆ ಕಪ್ಪಗಿದ್ದ ಹಲ್ಲು ಬಿಟ್ಟು ನಗು ಬೀರಿತು ಮುದುಕಿ. ಊರಿಂದ ತುಸು ದೂರ ಬಂದವನೇ ಸುಮ್ಮನೆ ಸೇಂಗಾ ಹಾಕಿದ್ದ ಹೊಲದ್ದಲ್ಲಿ ಕೂತೆ. ಸಣ್ಣಗೆ ಬೆಳಕು ಕರಗುತಲಿತ್ತು, ಕಾಡುಗತ್ತಲು ತುಂಬಿದ್ದ ಮನಸ್ಸಲ್ಯಾರೋ ಲಾಟ...