Posts

ನಾನು ಮತ್ತು ನಲ್ಲೆಯ ನಗುವೂ

Image
ನಿನ್ನ ನಗೆಯ ಬುಗ್ಗೆಯಲ್ಲೇ ತೇಲಿಸುವೆ ಸುಮ್ಮನೇ ಪ್ರೀತಿಯೆಂಬ ಘಮದಲ್ಲೇ ಅರಳಿಸಿರುವೆ ನನ್ನನೆ ಕೋಟಿ ಕೋಟಿ ಕನಸುಗಳ ಕೋಟೆಯನ್ನೇ ಕಟ್ಟಿಹೆ ನಿನ್ನ ಒಲವು ತಾನೆ ನನಗೆ ಗಟ್ಟಿಯಾದ ಇಟ್ಟಿಗೆ ಖುಷಿಯೆಂಬ ನೂರು ಹೂವು ಅರಳಿರುವವು ವನದಲಿ ನಿನ್ನ ಮೊಗದ ಚಿತ್ರವೊಂದೆ ನನ್ನ ಈ ಮನದಲಿ

ಅಪ್ಪುಗೆಯ ಬಯಕೆ

Image
ಒಮ್ಮೆ ಬಿಗಿದಪ್ಪು ಗೆಳತಿ ನನ್ನ ಅರ್ಥೈಸಿಕೊಂಡು ಕಣ್ಣ ಕನಸುಗಳನ್ನ ಹಗಲು-ರಾತ್ರಿಗಳೆನ್ನದೆ ನೆನೆದಿರುವೆ ಕವನದೊನಪುಗಳಲಿ ನಿನ್ನ ಕಂಡಿರುವೆ ಒಮ್ಮೆ ಬಿಗಿದಪ್ಪು ಗೆಳತಿ ನನ್ನ ಅಕ್ಷರಗಳ ಬರೆಯಲು ಕುಳಿತು ನಿನ್ನ ಚಿತ್ರ ಬಿಡಿಸಿರುವೆ ಮರೆತು ನಗುವಿನ ಮೊಗವಷ್ಟೆ ನನಗೆ ಕಾಣುತಿದೆ ನಗುವಿನಲರಿಗೆ ಮನಸು ಮರುಳಾಗುತಿದೆ ಒಮ್ಮೆ ಬಿಗಿದಪ್ಪು ಗೆಳತಿ ನನ್ನ ಕನಸುಗಳು ಬಿಡಲೊಲ್ಲವು ಹಾಗೆ ಅಪ್ಪುಗೆಯ ನಂತರ ಹಾರುವವು ಮೆಲ್ಲಗೆ ಮೌನಗಾಮಿಯ ಬಯಕೆ ಇದು ಬಿಗಿದಪ್ಪಿಬಿಡು ಒಮ್ಮೆ ಜೋರಾಗಿ ಕರೆದು

ಅಲೆಯು ಅವಳು, ತೀರ ನಾನು

Image
ನಿನ್ನ ನಗುವ ಕಂಡ ಮಾರನೇ ದಿನ ಮನಸು ಹೊಚ್ಚ ಹೊಸತಂತಾಗಿದೆ ಮುಂಗಾರಿನ ಮೊದಲ ಮಳೆಗೆ ಘಮಗುಡುವ ಮಣ್ಣಿನಂತೆ..... ಮಳೆಯ ಸ್ಪರ್ಷಕೆ ಮೊಗವ ಅರಳಿಸಿ ನಗುವ ಹಸಿರ ಚಿಗುರ ಎಲೆಯ ಮೇಲಿನ ಹನಿಗಳಂತೆ.... ಮೊದಲ ಮಳೆಯ ಹನಿಗಳನ್ನು ಮಿಂಚೊ ಮುತ್ತಂತಾಗಿಸಿ ಖುಷಿ ಪಡುವ ಚಿಪ್ಪಂತಾಗಿದೆ.... ಕಡಲ ಅಲೆಯು ಬರುವ ಹೊತ್ತಲಿ ತೀರ ಕಾದು ಕುಳಿತಿದೆ, ಬಂದ ನಂತರ ತೀರ ಚುಂಬಿಸಿ ನಗುತ ಕೈಗಳ ಬೀಸಿದೆ ಅಲೆಯು ಅವಳು, ಅವಳ ಕಾದು ಕುಳಿತ ತೀರ ನಾನು

ಮನದನ್ನೆಗೊಂದು ಮನವಿ!

Image
ಚೆಲುವೆ ನೀ ನಗು ಬೇಡವೆಂದವರಾರು ನಿನ್ನ ನಗು ನನಗೆ ಕಾಣಬಾರದಷ್ಟೆ... ನಿನ್ನ ಮನ ಮೋಹಕ ನಗೆಯಿಂದ ನನ್ನ ಹೃದಯ ನನ್ನ ಮಾತೆ ಕೇಳುತ್ತಿಲ್ಲ!!!!! ನಾನು ಕಾಣುತಿರುವ ಕನಸುಗಳೆಲ್ಲ ನೀನೆ ಆಗುತ್ತಿರುವೆ ನಿನ್ನ ಆ ಮೊಗದಲ್ಲಿನ ನಗುವಿನಿಂದ ನಾ ನಾನಾಗುತ್ತಿಲ್ಲ ಕರುಣೆ ತೋರಿ ನನಗೆ ಕಾಣದಂತೆ ನಗು

ಕನಸುಗಳ ಜಾತ್ರೆಯಲಿ

Image
ಕಣ್ಮುಚ್ಚಿ ಮಲಗಿದರೆ ಸಾಕು ನಿದ್ರಾದೇವತೆ ಕನಸುಗಳ ಜಾತ್ರೆಗೆ ಕರೆದೊಯ್ಯುವಳು ನನ್ನ, ಕನಸುಗಳೆಂದರೇನು ಸುಮ್ಮನೆಯೇ???? ಕೆಲವು ರಂಗು ರಂಗುನವಾದರೆ ಕೆಲವು ಕಪ್ಪು-ಬಿಳುಪಿನವು ಕಣ್ಣಕವಡೆಗೆ ಮಿಟುಕುವ ನೂರಾರು ಕನಸುಗಳು ನನ್ನನ್ನೇ ನೋಡುತ್ತಿದ್ದವು!!!!! ಕೆಲವು ಪರಿಚಿತವದುವಾದರೆ ಇನ್ನೂ ಕೆಲವು ಅಪರಿಚಿತವಾದುವು ಸುಂದರೀ ಕನಸುಗಳು ನನ್ನನೇ ನೋಡಿ ಕರೆಯುತ್ತಿದ್ದವು ನಾನು ಅವರೆಡೆ ಹೋಗುವಾಗ ದೋಪ್ಪೆಂದು ಬಿದ್ದೆ ಮೇಲೆದ್ದು ನೋಡುದಾಗ ಮಂಚದ ಮೇಲಿಂದ ಬಿದ್ದಿದ್ದೆ..........

ಒಂಟಿ ಪ್ರೇಮಿಯ ಬಯಕೆ....

Image
ನಾನೊಂದು ಹೂವಾಗುವೆ ಏಕೆಂದರೆ ನನ್ನ ಹುಡುಗಿಗೆ ಹೂವೆಂದರೆ ಇಷ್ಟವಂತೆ ನಾನೊಂದು ಮುಗುಳು ನಗುವಾಗುವೆ ಏಕೆಂದರೆ ನನ್ನ ಮನದನ್ನೆಗೆ ನಗುವೆಂದರೆ ಇಷ್ಟವಂತೆ ನಾನೊಂದು ಮರವಾಗುವೆ ಏಕೆಂದರೆ ನನ್ನ ಗೆಳತಿಗೆ ನೆರಳೆಂದರೆ ಖುಷಿಯಂತೆ ನಾನೊಂದು ಕಾಡಿಗೆಯಾಗುವೆ ಏಕೆಂದರೆ ನನ್ನ ಸುಂದರಿಯು ಹುಬ್ಬ ಇನ್ನೂ ತೀಡುವಳಂತೆ ಒಂದಿಷ್ಟು ಕವನಗಳಗುವೆ ಏಕೆಂದರೆ ನನ್ನ ಪ್ರಿಯತಮೆಗೆ ಕವನಗಳೆಂದರೆ ಇಷ್ಟವಂತೆ ಅವಳ ಹೃದಯವನ್ನಲಂಕರಿಸಿದ ಪ್ರಿಯಕರನಾಗಲಿಲ್ಲವಾದರೂ ಅವಳ ಇಷ್ಟ-ಕಷ್ಟಗಳರಿವ ಒಂಟಿ ಪ್ರೇಮಿಯಾಗುವೆ
Image