ಮಣ್ಣೊಳಗಿನ ಬೀಜ
ಹಸಿ ಮಣ್ಣೊಳಗಿದ್ದ ಬೀಜ ನಗುತ್ತಾ ಮೊಳಕೆಯೊಡೆಯುತ್ತಿದೆ, ಯಾರದೋ ಕೂಗಿಗೆ ಓಗೊಟ್ಟಂತೆ, ಆಕಾಶದೆತ್ತರೆಕೆ ಬೆಳೆದಿದ್ದ ಹೆಮ್ಮರವ ಅಣಕಿಸುವಂತೆ ಚಿಗುರ ನಾಲಿಗೆಯ ಚಾಚಿ ಮಣ್ಣಾಗಿದ್ದ ಬೀಜಕ್ಕೆ ಮತ್ತೆ ಹುಟ್ಟುವ ಬಯಕೆ ಅದಕೇ ಈ ಜನ್ಮ, ಸಾವಿಲ್ಲ ಬದುಕಬೇಕೆಂಬ ತನ್ನದೆಯ ಛಲಕೆ....
ಧೂಳು ಹತ್ತಿದ ಹಾಳೆಯೆಂದು ಬರೆವುದ ಬಿಡುವುದಿಲ್ಲ, ಧೂಳು ಹೊಕ್ಕಿದ ಕಣ್ಣುಗಳು ಶುದ್ಧಿಗೊಳಿಸುವ ಮನಸ್ಸು ಮಾಡಿದ್ದೇನೆ...